← ಶ್ರೀಕೃಷ್ಣ

ಕರುಣಿಸೋ ಕೃಷ್ಣ ಕರುಣಿಸೊ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಕರುಣಿಸೋ ಕೃಷ್ಣ ಕರುಣಿಸೊ |
ಕರುಣಿಸಿದರೆ ನಾ ನಿನ್ನನೆಂದಿಗು ಮರೆಯ

ಭೂತಳದೊಳು ನಾನು ಈ ತನುವುತೆತ್ತು |
ಪಾತಕದಲಿ ಯಮಯಾತನೆ ಪಟ್ಟೆ ||1||

ಇಂದೆನ್ನ ಹೃದಯವೆಂಬೊ ಮಂದಿರದೊಳು |
ಬಂದು ವಾಸವಾಗೊ ಇಂದಿರೆ ರಮಣ ||2||

ಹಿಂದಿನ ಅವಗುಣ ಒಂದೂ ಎಣಿಸದೆ |
ಮುಂದೆ ದೋಷಕ್ಕೆ ಮನವೆರಗಿಸದೆ ||3||

ಪಾಪ ಪುರುಷನೆಂಬೊ ಪಾಪಿಯ ಕೈಗೆ |
ಪೋಪಗೊಡದೆ ಎನ್ನ ಕಾಪಾಡೊ ರನ್ನ ||4||

ಅಂತ್ಯಕಾಲದಲಿ ಅಂತಕರು ಬಂದು |
ನಿಂತಾಗಲಿ ನಿನ್ನ ಚಿಂತೆ ಒದಗಲಿ ||5||

ಕನಸಿನೊಳಗೆ ನಿನ್ನ ನೆನಸಿಕೊಂಬಂತೆ |
ಮನಸು ಸುಸ್ಥಿರವಾಗಲಿ ಅನುಗಾಲವಿರಲಿ ||6||

ಇದ್ದಾಗ ದಾಸರದಾಸನೆನಿಸೊ ಬೇಗ |
ಅಬ್ಧಿಶಯನ ಸಿರಿ ವಿಜಯವಿಠ್ಠಲ ಕರುಣಿಸೊ||7||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.