← ಶ್ರೀಕೃಷ್ಣ

ಕೃಷ್ಣಾರ್ಪಿತವೆಂದು ಕೊಡುಲು

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಕೃಷ್ಣಾರ್ಪಿತವೆಂದು ಕೊಡುಲು ಎ-|
ಳ್ಳಷ್ಟಾದರೂ ಮೇರು ಪರ್ವತ ಮೀರುವದು

ಗಣ್ಯವಿಲ್ಲದೆ ಶಿಷ್ಯ ಸಹಿತ ಹರರೂಪ ಮುನಿ
ರಣ್ಯದಲಿ ಪಾಂಡವರು ಇರಲು ಬಂದು ||
ಪುಣ್ಯಬೇಕೆಂದೆನಲು ಬಂದು ದಳ ಶಾಖಾ ಕಾ-
ರುಣ್ಯದಲಿ ಹರಿ ಎನಲು ಅಪರಿಮಿತವಾದುದು ||1||

ಹಸ್ತಿನಾಪುರದಲ್ಲಿ ಸಕಲ ದೇವಾದಿಗಳ |
ಮಸ್ತಕದ ಮಣಿ ವಿದುರನ ಮನೆಯಲ್ಲಿ ||
ಹಸ್ತು ಬಂದುದಕೆ ಉಪಾಯವೇನೆಂದೆನಲು |
ಹಸ್ತದೊಳು ಪಾಲ್ಗುಡತಿಯೆರಿಯೆ ಮಿಗಿಲಾದುದೊ||2||

ಅಣು ಮಹತ್ತಾಗಲಿ ಆವಾವ ಕರ್ಮಗಳು |
ತೃಣನಾದರರಿತು ಅರಿಯದೆ ಮಾಡಲು ||
ಕ್ಷಣ ತನ್ನದೆನ್ನದೆ ಅರ್ಪಿತನೆ ನಿಕ್ಷೇಪ |
ಗುಣನಿಧಿ ವಿಜಯವಿಠ್ಠಲನ ಪುರದಲ್ಲಿ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.