← ಶ್ರೀಗಂಗೆ

ಗಂಗೆ ಸನ್ಮಂಗಳಾಂಗೆ

📂 ಶ್ರೀಗಂಗೆ
✍️ ವಿಜಯದಾಸ
🏷️ ಕೀರ್ತನೆಗಳು
ಗಂಗೆ ಸನ್ಮಂಗಳಾಂಗೆ
ರಂಗನಂಘ್ರಿಯ ಸಂಗೆ
ತುಂಗೆ ಕಾರುಣ್ಯ ಪಾಂಗೆ
ಅಸಿತಾಂಗೆ ತಿಂಗಳಾನನೆ

ಪರಮೇಷ್ಟಿ ಪಾತ್ರಜಾತೆ
ವರುಣನ್ನ ನಿಜದೈಯಿತೆ
ಸುರ ಮುನಿಗಣವಿನುತೆ
ವರದಾತೆ ಸರ್ವಖ್ಯಾತೆ
ತರಣಿಸುತನ ಉದ್ಧರಿಸಿದೆ
ಕರುಣದಿ ಧರೆಯೊಳು ನಿನಗೆ ಎ
ದುರುಗಾಣೆ ಶರಣಾ ||1||

ಭಯ ಪಾಪ ತಾಪದೊರೆ
ಜಯ ಜಯ ಗುಣಸಾರೇ
ತ್ರಯಭುವನ ಉದ್ಧಾರೆ
ಆಯುತಾರ್ಕವರ್ನ ನೀರೆ
ನಯವ ಭಕುತಿ ಹೃ
ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ||2||

ಘನ್ನ ವಾರಣಾಸಿ ಕಾಸಿವನ
ಆನಂದ ನಿವಾಸಿ ಪ್ರಣತ ಜನರಘನಾಶ
ಮಣಿಭೂಷೆ ಸೌಖ್ಯರಾಸಿ
ಅನನುತ ವಿಜಯವಿಠ್ಠಲನ ಮನಸಿನಲಿ
ನೆನೆಸುವ ಸಾಧನ ಕೊಡು ವಿರಜೇ ||3||
← ಶ್ರೀಗಂಗೆ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.