← ಶ್ರೀಗುರು

ಗುರುವಶಕೆ ನಮೋ ಎಂಬೆ

📂 ಶ್ರೀಗುರು
✍️ ವಿಜಯದಾಸ
🏷️ ಕೀರ್ತನೆಗಳು
ಗುರುವಶಕೆ ನಮೋ ಎಂಬೆ ನಮ್ಮ
ಮರುತ ಮತಾಬ್ದಿಗೆ ನಮೋ ಎಂಬೆ

ಶ್ರೀ ಮದಾನಂದತೀರ್ಥ ಪದ್ಮನಾಭರಿಗೆ |
ರಾಮದೇವರ ಕಂದ ನರಹರಿಗೆ ||
ಕಾಮಿತ ಫಲವೀವ ಮಾಧವಕ್ಷೋಭ್ಯರಿಗೆ |
ಆ ಮಹಾಮಹಿಮ ಜಯತೀರ್ಥ ರಾಯರಿಗೆ ||1||

ವಿದ್ಯಾಧಿರಾಜರಿಗೆ ವಿಜಯ ಕವೀಂದ್ರ ಸು |
ಸದ್ಗುಣ ವಾಗೀಶ ರಾಮಚಂದ್ರರಿಗೆ ||
ವಿದ್ಯಾನಿಧಿ ರಘುನಾಥ ರಘುವರ್ಯತೀರ್ಥರಿಗೆ |
ಅದ್ವೈತಮತ ಖಂಡ ರಘೋತ್ತರಾಯರಿಗೆ ||2||

ವೇದವ್ಯಾಸ ವಿದ್ಯಾಧೀಶ ವೇದನಿಧಿ ಮುನಿಗೆ |
ಸಾಧುಜನ ಪ್ರಿಯ ನಿತ್ಯ ವತ್ರರಿಗೆ ||
ಮೇದಿನಿಯಲಿ ಮೆರೆದ ಸತ್ಯನಿಧಿತೀರ್ಥರಿಗೆ |
ವಾದಿಗಜಕೆ ಸಿಂಹ ಸತ್ಯನಾಥರಿಗೆ ||3||

ಯತಿಶ್ರೇಷ್ಠ ಸತ್ಯಾಭಿನವತೀರ್ಥರಿಗೆ |
ಸತತ ಸಜ್ಜನಪಾಲ ಸತ್ಯಪೂರ್ಣರಿಗೆ ||
ಅತಿಶಯವಾನಂದ ಸತ್ಯ ವಿಜರಿಗೆ |
ಮತ ಉದ್ಧಾರಕ ಶ್ರೀ ಸತ್ಯಪ್ರಿಯರಿಗೆ||4||

ಇಂತು ಗುರುಗಳ ಸಂತರೆ ಕೊಂಡಾಡಿ
ಇಂತು ಸುತಾಪವನುರುಹಿ ಬಿಟ್ಟು ||
ಸಂತೋಷಿ ನಾನಾದೆ ವಿಜಯವಿಠ್ಠಲನ್ನ
ಚಿಂತಿಯ ಮಾಡುವೆ ದಾಸರ ದಯದಿಂದ ||5||
← ಶ್ರೀಗುರು ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.